ಗೂಗಲ್ ಮೀಟ್
ಕರೋನ ಪ್ರಾರಂಭವಾಗಿ ನೋಡನೋಡುತ್ತಲೇ ೧ ವರ್ಷ ಕಳೆದೇಹೋಯಿತು. ೨೦೨೧ ಬರಲಿ ಈ ಕಷ್ಟಗಳೆಲ್ಲ ಕಳೆದುಹೋಗುತ್ತವೆ ಎಂಬ ಆಶಾಭಾವನೆಯಿಂದ ಕಾದಿದ್ದೇ ಬಂತು, ಈಗ ಎರಡನೇ ಅಲೆ. ಕರೋನ ಸೃಷ್ಟಿಸಿದ ಅವಾಂತರಗಳು ಅನೇಕ; ಅದು ಬೀರಿದ ದುಷ್ಟರಿಣಾಮಗಳು ಅನೇಕಾನೇಕ; ಕರೋನಾ ಅಲೆಗೆ ಸಿಲುಕಿದ ಹಲವಾರು ಕ್ಷೇತ್ರಗಳಲ್ಲಿ ಶೈಕ್ಷಣಿಕ ಕ್ಷೇತ್ರವೂ ಒಂದು; ಪ್ರತಿದಿನ ಶಾಲೆಗೆ ಹೋಗಿ ತಮ್ಮ ಸ್ನೇಹಿತರೊಂದಿಗೆ ಬೆರೆತು, ಶಿಕ್ಷಕರೊಂದಿಗೆ ಚರ್ಚಿಸಿ, ಆಟ ಪಾಠಗಳನ್ನು ಕಲಿಯುತ್ತಾ, ಹಲವು ಸಾಮಾಜಿಕ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾ ಉತ್ತಮ ನಾಗರೀಕರಾಗಲು ದಿಟ್ಟ ಹೆಜ್ಜೆಯನ್ನಿಡುತ್ತಾ ಸಾಗುತ್ತಿದ್ದ ಎಳೆಯ ಕಂದಮ್ಮಗಳನ್ನು, ಹದಿಹರೆಯದ ಮಕ್ಕಳನ್ನು, ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ತರುಣ-ತರುಣಿಯರನ್ನು ಕರೋನ ಶಾಲೆ ಕಾಲೇಜುಗಳಿಂದ ದೂರ ಮಾಡಿಬಿಟ್ಟಿತು.
ಇನ್ನು ಶಿಕ್ಷಕರ, ಉಪನ್ಯಾಸಕರ ಪಾಡಂತೂ ಹೇಳತೀರದು. ಆನ್ ಲೈನ್ ತರಗತಿಗಳಿಗೆ ಒಗ್ಗಿಕೊಳ್ಳುವಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳಲೇಬೇಕಾಯಿತು. ನೇರವಾಗಿ ವಿದ್ಯಾರ್ಥಿಗಳ ಮುಖಗಳನ್ನು ನೋಡಿ ಪಾಠ ಮಾಡುತ್ತಾ ಅರ್ಥವಾಯಿತಾ ಮಕ್ಕಳೇ ಎಂದು ಕೇಳುತ್ತಾ ಎಲ್ಲಿ, ಯಾವ ಅಂಶ ಅರ್ಥವಾಗಲಿಲ್ಲವೆಂಬುದನ್ನು ನೇರವಾಗಿ ಕೇಳುತ್ತಾ ಅದನ್ನು ಅವರಿಗೆ ತಿಳಿಸಿ ಹೇಳಿಕೊಡುತ್ತಿದ್ದ ಪರಿಯನ್ನು, ಗೂಗಲ್ ಮೀಟ್ ಎಂಬ ಕ್ಲಾಸ್ ರೂಂ, ನುಂಗಿಬಿಟ್ಟಿತು. ವೀಡಿಯೋ ಆಫ್ ಮಾಡಿ, ಮ್ಯೂಟ್ ಮಾಡಿ, ಯಾರಿಗಾದರೂ ಸಂದೇಹವಿದ್ದರೆ ಅನ್ ಮ್ಯೂಟ್ ಮಾಡಿ ಕೇಳಿ ಎಂಬ ಪದಗಳು ಪದೇ ಪದೇ ತರಗತಿಯಲ್ಲಿ ಕೇಳಿಬರಲು ಪ್ರಾರಂಭಿಸಿದವು. ೧ ರಿಂದ ೪ನೇ ತರಗತಿಯವರೆಗಿನ ಮಕ್ಕಳಿಗೆ ಆನ್ ಲೈನ್ ತರಗತಿಗಳನ್ನು ಮಾಡಲೇಬಾರದೆಂಬ ಕೂಗು ಕೇಳಿಬಂದವು. ಆದರೂ ಆ ಸಣ್ಣ ಮಕ್ಕಳು, ದೊಡ್ಡವರಿಗಿಂತ ಹೆಚ್ಚಾಗಿ ಗೂಗಲ್ ಮೀಟ್ ಡೌನ್ ಲೋಡ್ ಮಾಡುವುದು, ಮ್ಯೂಟ್ ಮಾಡಿಕೊಳ್ಳುವುದು, ಸಾಧ್ಯವಾದಲ್ಲಿ ಎಲ್ಲರನ್ನೂ ಮ್ಯೂಟ್ ಮಾಡುವುದು, ಇನ್ನೊಬ್ಬರು ಉತ್ತರಿಸುವಾಗ ತಾವೂ ಉತ್ತರಿಸುವುದು ಇದನ್ನು ಕಲಿತೇಬಿಟ್ಟರು. ಯಾವುದನ್ನು ಮಕ್ಕಳ ಕೈಗೆ ಕೊಡಬಾರದು ಎಂದು ಎಲ್ಲ ಶಿಕ್ಷಿತ ಸಮುದಾಯದವರು ಅಂದುಕೊಂಡಿದ್ದರೋ ಆ ಸಾಧನವಾದ ಮೊಬೈಲ್ ಅನ್ನು ಮಕ್ಕಳ ಕೈಗೆ ಕೊಡಲೇಬೇಕಾದ ಅನಿವಾರ್ಯತೆ ಬಂದೇ ಬಿಟ್ಟಿತು. ಮೊಬೈಲ್, ಲ್ಯಾಪ್ ಟಾಪ್ ಗಳನ್ನು ತೆರೆದು ಕೂರುವುದು ಮಕ್ಕಳ ನಿತ್ಯದ ಕಾಯಕವಾಗಿಬಿಟ್ಟಿತು. ನಗರ ಪ್ರದೇಶಗಳಲ್ಲಿ, ವಿದ್ಯಾವಂತ ಪೋಷಕರಿರುವಲ್ಲಿ ಮಕ್ಕಳಿಗೆ ಸರ್ವವಿಧವಾದ ಸೌಲಭ್ಯವೂ ದೊರೆಯಿತು. ಆದರೆ....
ಹಳ್ಳಿಗಳಲ್ಲಿರುವ ಮಕ್ಕಳ ಕಥೆ???
ಸ್ಮಾರ್ಟ್ ಫೋನ್ ಎಷ್ಟು ಜನರ ಬಳಿ ಇದೆ ಎಂಬ ಸರ್ವೇ ಆರಂಭವಾಯಿತು. ಸ್ಮಾರ್ಟ್ ಫೋನ್ ಇಲ್ಲದಿರುವವರ ಗೋಳು ಹೇಳತೀರದು. ಪೋಷಕರಿಗೆ ಫೋನ್ ಮಾಡಿ ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದೆಯೇ ಎಂಬ ಪ್ರಶ್ನೆ ಕೇಳಿಬಿಟ್ಟರೆ ಸಾಕು.... ಅಯ್ಯೋ ಮೇಡಮ್ಮೋರೆ ನಮ್ಮ ಮನೆಯಲ್ಲಿ ಟಚ್ ಫೋನ್ ಇಲ್ಲ, ಈ ಸಲ ಹತ್ತಿಗೆ ಅಂತ ರೇಟ್ ಬಂದಿಲ್ಲ, ೧೦೦೦೦ ದುಡ್ಡು ಕೊಟ್ಟು ನಾನು ಸ್ಮಾರ್ಟ್ ಫೋನ್ ಹೇಗೆ ತೆಗೆಸಿಕೊಡಲಿ ಎಂದು ಒಬ್ಬರು ಹೇಳಿದರೆ, ಮೇಡಂ, ನಮ್ಮ ಮನೆಯಲ್ಲಿ ಸ್ಮಾರ್ಟ್ ಫೋನ್ ಇದೆ ಆದರೆ ಕರೆನ್ಸಿ ಇಲ್ಲ ಅಂತ ಇನ್ನೊಬ್ಬರು, ಮೇಡಂ ಸ್ವಲ್ಪ ನಮ್ಮ ಮಗಳಿಗೆ ಬುದ್ಧಿ ಹೇಳಿ, ಅದೇನೋ ಟಚ್ ಫೋನ್ ಬೇಕು ಅಂತ ಹಠ ಮಾಡ್ತಿದ್ದಾಳೆ, ಗೇಯ್ಕೊಂಡು ತಿನ್ನೋರು ನಾವು ಅಷ್ಟು ದುಡ್ಡು ಎಲ್ಲಿಂದ ತರಾಂವಾ? ಅನ್ನೋ ರಾಗ ಮತ್ತೊಬ್ಬರದು, ಮೇಡಂ ಸ್ಮಾರ್ಟ್ ಫೋನ್ ಇದೆ, ನನ್ನ ಮಗ ಯಾವಾಗಲೂ ಫೋನ್ ನೋಡ್ತಾ ಇರ್ತಾನೆ ಅದೇನ್ ಓದ್ತಾ ಇದ್ದಾನೋ ಇನ್ನೇನು ನೋಡ್ತಾನೋ ಗೊತ್ತಿಲ್ಲ ಅಂತ ಮಗದೊಬ್ಬರು, ನನ್ನ ಮಗಳು ದೊಡ್ಡವಳಾಗಿದ್ದಾಳೆ ಮೇಡಂ, ಇನ್ನು ೬ ತಿಂಗಳು ಅವಳಿಗೆ ಯಾವ ಮೊಬೈಲೂ ಕೊಡಲ್ಲ; ಈ ರೋಗ ಇರೋವಾಗ ಸ್ಕೂಲಿಗೂ ಕಳ್ಸಲ್ಲ ಅಂತ ಮತ್ತೊಬ್ಬ ಮಹನೀಯರು, ಮೇಡಂ, ಎಷ್ಟು ಫೋನ್ ತಗೋಬೇಕು ಹೇಳಿ, ಇಬ್ರು ಮಕ್ಕಳು ೯ ಮತ್ತು ೧೦ನೇ ತರಗತಿಯಲ್ಲಿದ್ದಾರೆ, ಇಬ್ಬರೂ ಇರುವ ಒಂದು ಮೊಬೈಲಿಗೆ ಕಚ್ಚಾಡುತ್ತಾರೆ, ನೀವೇ ಹೇಳಿ ನಾನೇನ್ಮಾಡ್ಲಿ ಅಂತ ಕೈ ಚೆಲ್ಲುವ ತಾಯಿ; ಮೇಡಂ, ಫೋನ್ ನಂಬರ್ ಕಿರಣಂದೇ ಆದ್ರೆ ನಾನು ಫೋನ್ ತಗೊಂಡು ಕೆಲ್ಸದ ಮೇಲೆ ಬೇರೆ ಊರಿಗೆ ಬಂದಿದ್ದೀನೆ; ಮತ್ತೆ ಹಳ್ಳಿಗೆ ಹೋಗೋದು ಒಂದು ತಿಂಗಳಾಗುತ್ತೆ ಅನ್ನೋ ಅಸಹಾಯಕತೆ ಒಬ್ಬ ಪೋಷಕರದ್ದು. ವಾಟ್ಸ್ ಅಪ್ ಗ್ರೂಪಿಗೆ ಸೇರಿಸ್ತಾರಂತೆ, ಗೂಗಲ್ ಮೀಟ್ ನಲ್ಲಿ ಕ್ಲಾಸ್ ಮಾಡ್ತಾರಂತೆ ಅಂತ ಪಕ್ಕದ ಮನೆಯವರದ್ದು, ಫ್ರೆಂಡಿಂದು, ಅತ್ತೇದು, ಮಾವಂದು ಹೀಗೆ ಯಾರದ್ದಾದರೂ ಒಂದು ನಂಬರ್ ಕೊಟ್ರೆ ಸೈ ಆದ್ರೆ ನಂ ಹತ್ರನೂ ಸ್ಮಾರ್ಟ್ ಫೋನ್ ಇದೆ ಅಂತ ತೋರಿಸ್ಕೋಬೇಕು ಅಂತ ಮಕ್ಕಳು ನಂಬರ್ ಕೊಟ್ಟಿದ್ದೇ ಕೊಟ್ಟಿದ್ದು; ಸ್ಮಾರ್ಟ್ ಫೋನ್ ಇಲ್ಲದವರು ಸುಮ್ಮನೇ ಕೂತಿದ್ದೇ ಕೂತಿದ್ದು...
ಈ ಎಲ್ಲಾ ಫೋನ್ ನಂಬರ್‌ಗಳಲ್ಲಿ ಅಸಲಿ ಯಾವ್ದು, ಯಾವ ನಂಬರ್ ನಂ ಸ್ಕೂಲ್ ಮಕ್ಕಳದ್ದು ಅಂತ ಕಂಡುಹಿಡಿಯೋ ಹೊತ್ತಿಗೆ ಸಾಕು ಸಾಕಾಯ್ತು. ಇನ್ನು ಮೊಬೈಲ್ ಮೂಲಕ ಪಾಠ ಮಾಡೋದು ಅಂದ್ರೆ ಸುಮ್ನೆನಾ? ಅದಕ್ಕೆ ಸಾಕಷ್ಟು ತಯಾರಿ ಬೇಕು. ಎಲ್ಲಾ ಮಕ್ಕಳೂ ಗೂಗಲ್ ಮೀಟ್ ಇನ್ಸ್ಟಾಲ್ ಮಾಡಿಕೊಂಡಿದ್ದಾರಾ ಅಂತ ಪರೀಕ್ಷಿಸಬೇಕು. ಅಥವಾ ಇನ್ಯಾವುದಾದರೂ ಆಪ್ ಇದ್ರೆ, ಗೂಗಲ್ ಕ್ಲಾಸ್ ರೂಂ, ಮೈಕ್ರೋಸಾಫ್ಟ್ ಟೀಮ್ಸ್, ಝೂಮ್, ಹೀಗೆ ಯಾವ್ದು ಒಳ್ಳೇದು ಅಂತ ನೋಡಿ ಅದನ್ನು ಪ್ರತಿ ಫೋನ್‌ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಲು ಹೇಳ್ಭೇಕು; ಅಲ್ಲದೆ ಸೂಕ್ತವಾಗಿ ಪವರ್ ಪಾಯಿಂಟ್ ಪ್ರಸೆಂಟೇಷನ್ ತಯಾರಾಗ್ಬೇಕು; ಅಥವಾ ಕೈಯಲ್ಲಿ ಬರೆದು ತೋರಿಸೋದಾದ್ರೆ ಒಳ್ಳೆ ಬೋರ್ಡ್ ಇರ್ಬೇಕು, ಕ್ಯಾಮರಾ ಅಡ್ಜಸ್ಟ್ ಮಾಡ್ಬೇಕು; ಸ್ಕ್ರೀನ್ ಮೇಲೆ ಕಾಣೋದ್ರಿಂದ ಮುಖ ತುಂಬ ಹತ್ರ ಬರ್ದೇ ಇರೋ ಥರ ನೋಡ್ಕೋಬೇಕು; ಮೊದಲು ಈ ಆಪ್ಗಳ ಶಿಷ್ಟಾಚಾರವನ್ನು ಕರಗತ ಮಾಡ್ಕೋಬೇಕು; ಒಂದೇ ಎರಡೇ? ಎಷ್ಟೇ ಆದ್ರೂ ಮಕ್ಕಳ ಮುಂದೆ ನಮಗೆ ಹೆಚ್ಚು ತಿಳಿದಿದೆ ಅಂತ ತೋರಿಸಿಕೊಳ್ಳೊಕಾದ್ರೂ ನಾವು ಅಪ್ ಡೇಟ್ ಆಗ್ಲೇಬೇಕು; ಇದು ಶಿಕ್ಷಕರಿಗೂ ಒಂದು ಸವಾಲು; ಅಲ್ದೇ ಮಕ್ಕಳಿಗೂ, ಮಕ್ಕಳ ಪೋಷಕರಿಗೂ....
ಇಷ್ಟೆಲ್ಲ ಆಗಿ ನಾನೂ ಒಂದು ಗೂಗಲ್ ಕ್ಲಾಸ್ ಮಾಡೇ ಬಿಡೋಣ ಅಂತ ತೀರ್ಮಾನ ಮಾಡಿ, ಮೊದಲು ಮಕ್ಕಳ ವಾಟ್ಸ್ ಅಪ್ ಗ್ರೂಪಿಗೆ ಲಿಂಕ್ ಕಳಿಸಬೇಕು ಅನ್ಕೊಂಡು, ಲಿಂಕ್ ಜನರೇಟ್ ಮಾಡಿ ಕಳಿಸಿದ್ದಾಯ್ತು. ನಾವೆಲ್ಲ ಆನ್ ಲೈನ್ ಟ್ರೈನಿಂಗ್ ಅಟೆಂಡ್ ಮಾಡೋವಾಗ ಚಾಚೂ ತಪ್ಪದೆ ಲಿಂಕನ್ನು ಸರಿಯಾದ ಸಮಯಕ್ಕೆ ಓಪನ್ ಮಾಡಿ ಕಾಯ್ತಾ ಇರ್ತಿದ್ವಿ. ಲೇಟ್ ಆದ್ರೆ ನಮ್ಮನ್ನು ಅಡ್ಮಿಟ್ ಮಾಡ್ಕೊಳ್ತಾರೋ ಇಲ್ವೋ ಅನ್ನೋ ಭಯ ಬೇರೆ. ನಮ್ಮ ೧೦ನೇ ತರಗತಿಯ ಮಕ್ಕಳೂ ಹಾಗೇ ಇರ್ತಾರೆ ಅಂತ, ನಾನೇನೋ ನಿಗದಿತ ಸಮಯಕ್ಕೆ, ಲಿಂಕ್ ಓಪನ್ ಮಾಡಿ, ಕೋಣೆಯಲ್ಲಿ ಒಂದೂ ಶಬ್ದವೂ ಇರದಂತೆ, ಸಾಕಷ್ಟು ಬೆಳಕು ಇರುವಂತೆ ಎಲ್ಲಾ ತಯಾರಿ ಮಾಡಿ ಕಾದಿದ್ದೇ ಬಂತು; ಕೇವಲ ಇಬ್ಬರೇ ಮಕ್ಕಳು ಮೊದಲ ದಿನ ಮೀಟಿಂಗ್ ಜಾಯಿನ್ ಆದ್ರು. ಪ್ರಥಮ ಚುಂಬನೇ ದಂತಭಗ್ನಂ ಎನ್ನುವಂತೆ ಸಾಕಷ್ಟು ನಿರಾಸೆ ಆಯ್ತು. ಮೀಟಿಂಗ್ ಅಟೆಂಡ್ ಮಾಡಿದ ಮಕ್ಕಳಿಗಾದ್ರೂ ಉಪಯೋಗವಾಗ್ಲಿ ಅಂತ ಕೆಲವು ಪ್ರಶ್ನೆಗಳನ್ನು ಕೇಳಿ ಮೊದಲ ದಿನದ ಗೂಗಲ್ ಕ್ಲಾಸ್ ಮುಕ್ತಾಯ ಮಾಡಿದ್ದಾಯ್ತು. ಇದೇ ಗುಂಗಿನಲ್ಲಿ ಪ್ರತಿಯೊಬ್ಬರಿಗೂ ಫೋನ್ ಮಾಡಿ ಯಾಕೆ ಕ್ಲಾಸ್ ಅಟೆಂಡ್ ಮಾಡ್ಲಿಲ್ಲ ಅಂತ ಕೇಳ್ದಾಗ, ಅಯ್ಯೋ ಮೇಡಂ, ಇಂಟರ್ನೆಟ್ ಕನೆಕ್ಷನ್ ಇರ್ಲಿಲ್ಲ; ನಮ್ಮಪ್ಪ ಮೊಬೈಲ್ ತಗೊಂಡು ಹೋಗಿದ್ರು; ಮನೇಲಿ ನೀರು ಬರ್ತಿತ್ತು ಹಿಡೀತಾ ಇದ್ದೆ; ಹೊಲದಲ್ಲಿ ಯಾರೂ ಆಳು ಇರ್ಲಿಲ್ಲ ಅದಕ್ಕೇ ಹೊಲಕ್ಕೆ ಹೋಗು ಅಂತ ಅಪ್ಪ ಹೇಳಿದ್ರು, ನಾನು ಹೊಲಕ್ಕೆ ಹೋಗಿದ್ದೆ, ನಾನು ಊರಲ್ಲಿ ಇರ್ಲಿಲ್ಲ, ಮೇಡಂ, ನನಗೆ ಲಿಂಕ್ ಓಪನ್ ಆಗ್ಲೇ ಇಲ್ಲ ಹೀಗೆ ನೂರಾರು ಕಾರಣಗಳು ಕೇಳಿಬಂದವು.
ನಾನು ತಪ್ಪಿದ್ದೆಲ್ಲಿ? ಎಷ್ಟೋ ಜನ ಒಂದೇ ವೆಬಿನಾರ್ ನಲ್ಲಿ ನೂರಾರು ಜನರನ್ನ ತಲ್ಪಲ್ವಾ? ಎಷ್ಟೋ ವರ್ಕ್ ಶಾಪ್ ಗಳು ಆನ್ ಲೈನ್ ನಲ್ಲಿ ನಡೀತಿಲ್ವಾ? ಎಷ್ಟೋ ಸರ್ಟಿಫಿಕೇಟ್ ಕೋರ್ಸ್ಗಳು ಇಂಟರ್ನೆಟ್ ನಲ್ಲಿ ಆಗ್ತಾ ಇಲ್ವಾ? ನಗರ ಪ್ರದೇಶದ ಸುಪ್ರಸಿದ್ಧ ಶಾಲೆಗಳು ಆನ್ ಲೈನ್ ತರಗತಿಗಳನ್ನು ನಡೆಸ್ತಾ ಇಲ್ವಾ? ಯಾಕೆ? ನಾನ್ಯಾಕೆ ಪ್ರಯತ್ನಿಸಬಾರ್ದು? ಇದು ಸರಿಯಾಗ್ಬೇಕು ಅಂದ್ರೆ ನಾನು ಏನ್ಮಾಡ್ಬೇಕು? ಅನ್ನೋ ಹತ್ತಾರು ಪ್ರಶ್ನೆಗಳು ಮನದಲ್ಲಿ ಮೂಡಿದವು. ಹೇಗಾದ್ರೂ ನಾನು ಗೂಗಲ್ ಮೀಟ್ ನಲ್ಲಿ ಕ್ಲಾಸ್ ಮಾಡ್ಲೇಬೇಕು ಅನ್ನೋ ಸಾತ್ವಿಕ ಹಠ ಮೂಡಿತು.
ಇರುವ ೪೦ ಮಕ್ಕಳನ್ನು ೨ ವಾಟ್ಸ್ ಅಪ್ ಗುಂಪುಗಳನ್ನಾಗಿ ಮಾಡಿದೆ; ವಾರಕ್ಕೆ ಎರಡು ಬಾರಿ ಎರಡೂ ಗುಂಪಿಗೂ ಕ್ಲಾಸ್ ತೆಗೆದುಕೊಳ್ಳಲೇಬೇಕೆಂಬ ಸಂಕಲ್ಪ ಮಾಡಿದೆ. ಮಕ್ಕಳ ಪೋಷಕರನ್ನು ಫೋನ್ ಮೂಲಕ ಸಂಪರ್ಕಿಸಿ ಇಂತಹ ದಿನ ಆನ್ ಲೈನ್ ಕ್ಲಾಸ್ ಇರುತ್ತದೆ. ನೀವು ನಿಮ್ಮ ಮಕ್ಕಳಿಗೆ ಫೋನ್ ಕೊಡಿ ಎಂದೆ; ಅವರಿಗೆ ಸೂಕ್ತವಾದ ಸಮಯ ಯಾವುದು ಎಂದು ಕೇಳಿದೆ; ಎಲ್ಲರಿಗೂ ಗೂಗಲ್ ಮೀಟ್ ನಲ್ಲಿ ಅನುಸರಿಸಬೇಕಾದ ಶಿಷ್ಟಾಚಾರಗಳ ಬಗ್ಗೆ ತಿಳಿಸಿದೆ; ಇಷ್ಟೆಲ್ಲ ಆದ ನಂತರ, ನಾಳೆ ಕ್ಲಾಸ್ ಇದೆ ಅಂದ್ರೆ, ಇವತ್ತೇ ಫೋನ್ ಮಾಡಿ, ಲಿಂಕ್ ಕಳಿಸ್ತೀನಿ, ನಾಳೆ ಇಷ್ಟು ಹೊತ್ತಿಗೆ ಕ್ಲಾಸ್ ಅಂತ ತಿಳಿಸಿದೆ, ಅಲ್ಲದೇ ವಾಟ್ಸ್ ಅಪ್ ಗ್ರೂಪಿನಲ್ಲಿ ಲಿಂಕ್ ಕಳಿಸಿದೆ. ಇಷ್ಟೆಲ್ಲ ಪೂರ್ವ ತಯಾರಿ ಫಲ ಕೊಡುತ್ತದೋ ಇಲ್ಲವೋ? ಮಕ್ಕಳು ಕ್ಲಾಸಿಗೆ ಬರುತ್ತಾರೋ ಇಲ್ಲವೋ ಎಂಬ ಆತಂಕ ಇದ್ದೇ ಇತ್ತು. ತರಗತಿ ಇದ್ದ ದಿನ ಕೇವಲ ಅರ್ಧ ಗಂಟೆ ಕ್ಲಾಸಿಗೆ ಪ್ಲಾನ್ ಮಾಡಿದೆ. ೧೦ ನಿಮಿಷ ಮೊದಲೇ ನಾನು ಜಾಯಿನ್ ಆಗಿ ಕಾಯುತ್ತಾ ಕುಳಿತೆ. ಮೊದಲು ಶರತ್, ನಂತರ ಕಿರಣ, ಆಮೇಲೆ ಮೋನಿಕ, ತದನಂತರ ಕಾವ್ಯ ಹೀಗೆ ೨೦ ಮಕ್ಕಳಿಗೆ ೧೬ ಮಕ್ಕಳು ಆ ದಿನ ಮೀಟಿಂಗ್ ಜಾಯಿನ್ ಆದರು. ಆಮೇಲೆ......
ನಮ್ಮ ಮಕ್ಕಳು ಕಿವಿಯಲ್ಲಿ ಇಯರ್ ಫೋನ್ ಹಾಕುವಷ್ಟು,, ಮೊಬೈಲ್ ಅನ್ನು ನಿಧಾನವಾಗಿ ತಮ್ಮ ಕೋಣೆಯಲ್ಲಿಟ್ಟು, ತಮ್ಮ ಅಪ್ಪ ಅವ್ವರಿಗೆ ಶ್ ಮಾತನಾಡಬೇಡಿ, ಮೇಡಂ ಕ್ಲಾಸ್ ಇದೆ ಎಂದು ಹೇಳುವಷ್ಟು, ಮೊಬೈಲ್ ಸ್ಕ್ರೀನ್ ನೋಡುತ್ತಾ ನಿಧಾನವಾಗಿ ಟೆಕ್ಷ್ಟ್ ಬುಕ್, ನೋಟ್ಸ್ ತೆರೆಯುವಷ್ಟು, ಯಾರಾದರೂ ಮಧ್ಯದಲ್ಲಿ ಅನ್ ಮ್ಯೂಟ್ ಮಾಡಿದರೆ, ಏಯ್ ಮ್ಯೂಟ್ ಮಾಡಿ ಎಂದು ಹೇಳುವಷ್ಟು, ಯಾರ ಹೆಸರನ್ನು ಕರೆಯುತ್ತೇನೋ ಅವರು ಮಾತ್ರ ಅನ್ ಮ್ಯೂಟ್ ಮಾಡಿ ಉತ್ತರಿಸುವಷ್ಟು, ಮತ್ತೆ ಏನಾದರೂ ಅನುಮಾನಗಳಿದ್ದರೆ, ಚಾಟ್ ಬಾಕ್ಸ್ನಲ್ಲಿ ಬರೆಯುವಷ್ಟು, ಗೂಗಲ್ ಫಾರಂ ಗಳ ಮೂಲಕ ಕ್ವಿಜ್ ಅಟೆಂಡ್ ಮಾಡುವಷ್ಟು ಹೀಗೆ ತರಗತಿಗಳು ಆಗುತ್ತಾ ಆಗುತ್ತಾ ಪಳಗಿಬಿಟ್ಟರು ನಮ್ಮ ಹಳ್ಳಿ ಹೈಕಳು. ಹಳ್ಳಿ ಮಕ್ಕಳು ಯಾರಿಗೂ ಕಡಿಮೆಯಿಲ್ಲ ಎಂದು ತೋರಿಸಿದರು; ನನ್ನ ಸಾತ್ವಿಕ ಹಠ ಗೆದ್ದಿತು. ಹಳ್ಳಿ ಮಕ್ಕಳು, ಸಿಟಿ ಮಕ್ಕಳು ಎಂದು ವರ್ಗೀಕರಣ ಮಾಡುವುದೇ ತಪ್ಪು ಎನಿಸಿತು. ಯಾರಿಗೇ ಆಗಲಿ ಅವಕಾಶಗಳನ್ನು ಕಲ್ಪಿಸಿಕೊಡುವುದು ಮುಖ್ಯ ಎಂದು ಮತ್ತೊಮ್ಮೆ ನನ್ನ ಮನ ನುಡಿಯಿತು.
Good one👍
ಪ್ರತ್ಯುತ್ತರಅಳಿಸಿಇದು ಎಲ್ಕ ಹಳ್ಳಿ ಶಾಲೆಯ ಅದರಲ್ಲು ಸರ್ಕಾರಿ ಶಾಲೆಯ ಶಿಕ್ಷಕರ ಅನುಭವ. ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿಚೆನ್ನಾಗಿದೆ.
ಪ್ರತ್ಯುತ್ತರಅಳಿಸಿಲೇಖನ ಚೆನ್ನಾಗಿದೆ. ಸನ್ನಿವೇಶದ ಯಥಾವತ್ ಚಿತ್ರಣ ನೀಡಿದ್ದೀರಿ ಗ್ರಾಮೀಣ, ಆಡು ಭಾಷೆಯನ್ನು ಇನ್ನು ಹೆಚ್ಚು ಬಳಸಿ ಒಂದು ಉತ್ತಮ ಲಲಿತಪ್ರಬಂಧವನ್ನಾಗಿಸಬಹುದಿತ್ತೇನೋ.....
ಪ್ರತ್ಯುತ್ತರಅಳಿಸಿಹೌದು. ಧನ್ಯವಾದಗಳು
ಅಳಿಸಿಉತ್ತಮ ಲೇಖನ
ಪ್ರತ್ಯುತ್ತರಅಳಿಸಿಎಲ್ಲಾ ಶಿಕ್ಷಕರದ್ದು ಇದೇ ಅನುಭವವಾದರೂ ಅದನ್ನು ಬರೆದ ರೀತಿ, ಪ್ರಸ್ತುತ ಪಡಿಸಿರುವ ರೀತಿ, ಶಬ್ದಗಳ ಬಳಕೆ ನಮ್ಮ ಅನುಭವಗಳನ್ನು ತೆರೆದಿಟ್ಟ ರೀತಿ ನನ್ನ ಮನಸ್ಸನ್ನು ಮುದಗೊಳಿಸಿತು. ಈ ಕೆಲಸವನ್ನು ಮುಂದುವರೆಸಿ. ಅಭಿನಂದನೆಗಳು
ಪ್ರತ್ಯುತ್ತರಅಳಿಸಿThank you very much
ಅಳಿಸಿಉತ್ತಮ ಸಾಂದರ್ಭಿಕ ಲೇಖನ. ಶಿಕ್ಷಕರು ದೃಢವಾಗಿ ನಿಶ್ಚಯಿಸಿ ಪ್ರಯತ್ನಿಸಿದರೆ, ಪೋಷಕರು, ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಿದರೆ, ತಂತ್ರಜ್ಞಾನಗಳ ಬಳಕೆಯಿಂದ ಕಲಿಕಾ ವಾತಾವರಣವನ್ನು ತಾವಿರುವಲ್ಲಿಯೇ ಸೃಷ್ಟಿಸಲು ಸಾಧ್ಯ ಎಂಬುದನ್ನು ಚೆನ್ನಾಗಿ ತಿಳಿಸಲಾಗಿದೆ. ಕೋರೋನಾದ ೨ ನೇ ಅಲೆಯನ್ನು ನೋಡಿದರೆ ೨೦೨೧ರ ಪೂರ್ವಾರ್ಧದಲ್ಲಿಯೂ ಗೂಗಲ್ ಮೀಟ್ ಕ್ಲಾಸ್ ಗಳೇ ಖಾಯಂಆಗಬಹುದು. ಹಾಗೇಯೇ ನಿಮ್ಮ ಈ ಲೇಖನದ ೨ ನೇ ಭಾಗವೂ ನಿರೀಕ್ಷಿತವಾಗಿದೆ.
ಪ್ರತ್ಯುತ್ತರಅಳಿಸಿಧನ್ಯವಾದಗಳು ಸರ್
ಅಳಿಸಿTumba chennagi moodi bandide!! Wonderful write up. Innu heege nimma vrutthi jeevanada lekhana galannu dakhalegolisi🙂🙂Totally relatable and relevant.
ಪ್ರತ್ಯುತ್ತರಅಳಿಸಿಸುಂದರವಾದ ಹಾಗೂ ಉತ್ತಮ ಲೇಖನ ಅನುಭವಿಸಿದವರಿಗೆ ಗೊತ್ತು ಅದರ ಪರಿಣಾಮ ಮತ್ತು ಅದರ ನೋವು. ಹೀಗೆಯೇ ನಿಮ್ಮ ಲೇಖನಗಳು ಮುಂದುವರೆಯಲಿ ಶಾರದಜೀ 👌👌👌
ಪ್ರತ್ಯುತ್ತರಅಳಿಸಿExperience is good. Presentation of the experience is also good
ಪ್ರತ್ಯುತ್ತರಅಳಿಸಿಬಹಳ ಚೆನ್ನಾಗಿದೆ
ಪ್ರತ್ಯುತ್ತರಅಳಿಸಿಅಭಿನಂದನೆಗಳು ಮೇಡಮ್,
ಪ್ರತ್ಯುತ್ತರಅಳಿಸಿವಾಸ್ತವವನ್ನು ತುಂಬಾ ಚೆನ್ನಾಗಿ ತೆರೆದಿಟ್ಟಿದ್ದೀರಿ. ಬರವಣಿಗೆ ಆಕರ್ಷಕವಾಗಿದೆ. ತಮ್ಮೊಂದಿಗೆ ಎದುರು ಕೂತು ಮಾತನಾಡಿದಂತೆ ಅನಿಸಿತು. ರೈಲಲ್ಲಿ ಒಟ್ಟಿಗೆ ಬರುವಾಗ ನಮ್ಮ ಮಾತುಕತೆ ನೆನಪಿಗೆ ಬಂತು. ತಮಗೆ ಭಾಷೆಯ ಹಿಡಿತವಿದೆ, ನಿರೂಪಣಾ ಶೈಲಿ ರೂಢಿಗತ ಆಗಿದೆ. ಇದು ತಮ್ಮ ಮೊದಲ ಬರೆಹ ಎಂದುದು ಆಶ್ಚರ್ಯ ತಂದಿತು. ತಾವು ನಾಟಕ ಕೂಡ ರಚಿಸಬಲ್ಲಿರಿ. ತಮ್ಮ ಬರೆವಣಿಗೆಯ ದಾಖಲೆ ಕಾರ್ಯ ಮುಂದುವರೆಸಿ. ಆತ್ಮೀಯ ಹಾರೈಕೆಗಳು.
ಓದಲು ಅವಕಾಶ ಕಲ್ಪಿಸಿದ್ದಕ್ಕೆ ಗೌರವದ ನಮನಗಳು ��
ಸರ್ ಧನ್ಯವಾದಗಳು. ತಮ್ಮ ಹಾರೈಕೆ ಸದಾ ಇರಲಿ
ಅಳಿಸಿWell written reflections... Change is constant...Keep shining..
ಪ್ರತ್ಯುತ್ತರಅಳಿಸಿ🙏🙏
ಪ್ರತ್ಯುತ್ತರಅಳಿಸಿಉತ್ತಮ ಪ್ರಯತ್ನ. ಬರಹ ನಿರಂತರವಾಗಿ ಮುಂದುವರಿಸಿ
ಪ್ರತ್ಯುತ್ತರಅಳಿಸಿಮೇಡಂ ನಿಮ್ಮ ಪ್ರಯತ್ನ ಚೆನ್ನಾಗಿ ಮೂಡಿ ಬಂದಿದೆ ಅನುಭವ ಕಿಂತ ದೊಡ್ಡದು ಮತ್ತೊಂದಿಲ್ಲ. ಧನ್ಯವಾದಗಳು.
ಪ್ರತ್ಯುತ್ತರಅಳಿಸಿಅತ್ಯುತ್ತಮ ಲೇಖನ. ಮಕ್ಕಳ ಜೊತೆ ಶಿಕ್ಷಕರಿಗೂ ತಂತ್ರಜ್ಞಾನದ ಜ್ಞಾನವರ್ಧನೆ ಅತಿ ಅಗತ್ಯವಿತ್ತು. ಕೋರೋನದಿಂದಾಗಿ ಅದು ಬಹುಬೇಗ ನೈಜ್ಯವಾಯಿತು
ಪ್ರತ್ಯುತ್ತರಅಳಿಸಿVery nice Madam.....
ಪ್ರತ್ಯುತ್ತರಅಳಿಸಿಲೇಖನ ಅತ್ಯುತ್ತಮವಾಗಿದೆ ಮೂಡಿಬಂದಿದೆ ಮೇಡಂ,
ಪ್ರತ್ಯುತ್ತರಅಳಿಸಿಪ್ರಸ್ತುತ ಸಂದರ್ಭದಲ್ಲಿ ಪ್ರತಿ ಶಿಕ್ಷಕರಿಗೆ ಆದ ಅನುಭವದ ನೈಜ ಚಿತ್ರಣ, ನಮ್ಮೆಲ್ಲರ ಪ್ರತಿನಿಧಿಯಾಗಿ ನಿಮ್ಮ ಅನುಭವವನ್ನು ಲೇಖನದ ಮೂಲಕ ಅಂಚಿಕೊಂಡದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ಮೇಡಂ.
ಲೇಖನ ಅತ್ಯುತ್ತಮವಾಗಿದೆ ಮೂಡಿಬಂದಿದೆ ಮೇಡಂ,
ಪ್ರತ್ಯುತ್ತರಅಳಿಸಿಪ್ರಸ್ತುತ ಸಂದರ್ಭದಲ್ಲಿ ಪ್ರತಿ ಶಿಕ್ಷಕರಿಗೆ ಆದ ಅನುಭವದ ನೈಜ ಚಿತ್ರಣ, ನಮ್ಮೆಲ್ಲರ ಪ್ರತಿನಿಧಿಯಾಗಿ ನಿಮ್ಮ ಅನುಭವವನ್ನು ಲೇಖನದ ಮೂಲಕ ಅಂಚಿಕೊಂಡದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ಮೇಡಂ.
Thank you sir🙏
ಅಳಿಸಿಬಹಳ ಉತ್ತಮ ಪ್ರಯತ್ನ. ಶುಭವಾಗಲಿ.
ಪ್ರತ್ಯುತ್ತರಅಳಿಸಿOk
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಪ್ರತಿಯೊಬ್ಬ ಶಿಕ್ಷಕ ಪಟ್ಟ ಪರಿಶ್ರಮ ಮತ್ತು ಕಷ್ಟ ಅಷ್ಟಿಷ್ಟಲ್ಲ. ಸರ್ಕಾರಿ ಶಾಲೆಯ ಶಿಕ್ಷಕರು ತಮ್ಮಲ್ಲಿ ಲಭ್ಯವಿರುವ ಸವಲತ್ತನ್ನು ಉಪಯೋಗಿಸಿ ಶಿಕ್ಷಣವನ್ನು ಮಕ್ಕಳಿಗೆ ಮುಟ್ಟುವಂತೆ ಮಾಡಿದ್ದು ಗಮನಾರ್ಹ.
ಪ್ರತ್ಯುತ್ತರಅಳಿಸಿನಿಮ್ಮ ಲೇಖನ ಅದ್ಭುತವಾಗಿ ಮೂಡಿಬಂದಿದ್ದು, ಪ್ರತಿಯೊಬ್ಬ ಶಿಕ್ಷಕರ ಅನುಭವವನ್ನು ಚೆನ್ನಾಗಿ ಹೇಳಿದ್ದಿರಾ. ಬರವಣಿಗೆ ಹೀಗೆ ಮುಂದುವರೆಯಲಿ.
Thank you
ಅಳಿಸಿAnubhavada lekhana.
ಪ್ರತ್ಯುತ್ತರಅಳಿಸಿBahala uttama.
Andina prastutha
Indigo jivantha.
Nivu Medida prayatna makkalige tumba upayogavayithu.thank u hss.
Bere lekhana' odalu kayuthiruva nimmaya......,...
TY😊
ಅಳಿಸಿಬಹಳ ಮಾಹಿತಿ ಮತ್ತು ಪರಿವರ್ತನೆ ಮಾಡಬಹುದು .. ಇದು ಬದಲಾವಣೆಯನ್ನು ತರಲಿ
ಪ್ರತ್ಯುತ್ತರಅಳಿಸಿಬಹಳ ಮಾಹಿತಿ ಮತ್ತು ಪರಿವರ್ತನೆ ಮಾಡಬಹುದು .. ಇದು ಬದಲಾವಣೆಯನ್ನು ತರಲಿ
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿGood attempt.!!!!.madam..@Concept is really awesome.Motivating the village learners and switches from unknown to known.. Keep growing..
ಪ್ರತ್ಯುತ್ತರಅಳಿಸಿTY sir
ಅಳಿಸಿತುಂಬಾ ಚೆನ್ನಾಗಿ ಮೂಡಿಬಂದಿದೆ.
ಪ್ರತ್ಯುತ್ತರಅಳಿಸಿಒಳ್ಳೆಯ ಪ್ರಯತ್ನ...
ಅಭಿನಂದನೆಗಳು
ಲೇಖನ ಬಹಳ ಚೆನ್ನಾಗಿದೆ.... ಒಟ್ಟಿಗೆ ಕೂತು ಮಾತಾಡಿದ ಹಾಗಿತ್ತು....ಎಲ್ಲಾ ಶಿಕ್ಷಕರ ಅನುಭವವೂ ಇದೇ ಆಗಿದೆ...ನನ್ನದೂ ಕೂಡ...ಬರವಣಿಗೆ ಹೀಗೆಯೇ ಮುಂದುವೆಯಲಿ
ಪ್ರತ್ಯುತ್ತರಅಳಿಸಿTY
ಅಳಿಸಿತುಂಬಾ ಚೆನ್ನಾಗಿದೆ ಮೇಡಂ.ಧನ್ಯವಾದಗಳು
ಪ್ರತ್ಯುತ್ತರಅಳಿಸಿಪ್ರಸ್ತುತ ಸನ್ನಿವೇಶದ ಅನಾವರಣ ವು ತುಂಬಾ ಚನ್ನಾಗಿ ಮೂಡಿ ಬಂದಿದೆ.. ನಿನ್ನ ಬರಹವು ಸದಾ ಮುಂದುವರಿಯಲಿ..
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏
ಅಳಿಸಿಲೇಖನ ಚೆನ್ನಾಗಿದೆ ಇದು ವಾಸ್ತವಿಕ ಬದುಕಿಗೆ ನೈಜವಾದ ಸಮಸ್ಯೆ ನಿಮ್ಮ ಬರಹವು ಹೀಗೆ ಸದಾ ಮುಂದುವರೆಯಲಿ ಧನ್ಯವಾದಗಳು ಮೇಡಂ.....
ಪ್ರತ್ಯುತ್ತರಅಳಿಸಿ🙏🙏
ಅಳಿಸಿನಿಮ್ಮ ಮೊದಲ ಪ್ರಯತ್ನ ಚೆನ್ನಾಗಿ ಮೂಡಿ ಬಂದಿದೆ ಮೇಡಂ. ನಿಮ್ಮ ಬರವಣಿಗೆ ಉತ್ತಮವಾಗಿ ಬಂದಿದೆ. ನಿಮ್ಮ ಈ ಪ್ರಯತ್ನ ಮುಂದುವರಿಸಿ ಮೇಡಂ. ನಿಮಗೆ ಯಾವಾಗಲೂ ನನ್ನ ಶುಭಹಾರೈಕೆಗಳು.👏👏👏
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏🙏
ಅಳಿಸಿನಿಜಕ್ಕೂ ಉತ್ತಮ ಪ್ರಯತ್ನ ಗ್ರಾಮೀಣ ಮಕ್ಕಳ ಸ್ಪಂದನೆ ಉತ್ತಮವಾಗಿದೆ
ಪ್ರತ್ಯುತ್ತರಅಳಿಸಿThank you very much🙏🙏
ಅಳಿಸಿಚೆನ್ನಾಗಿದೆ ಶಾರದಾ. ನನ್ನ ಅನುಭವವೂ ಇದೇ ಆಗಿತ್ತು
ಪ್ರತ್ಯುತ್ತರಅಳಿಸಿ👍👍
ಪ್ರತ್ಯುತ್ತರಅಳಿಸಿ