ಉಭಯ ಕುಶಲೋಪರಿ ಮುಗಿದ ಮೇಲೆ, ಸ್ವಲ್ಪ ಸೀನಿಯರ್ ಹಾಗೂ ವಯಸ್ಸಿನಲ್ಲಿ ಹಿರಿಯವರಾದ ಸಾರಾ ಅವರು ಒಬ್ಬನೇ ಮಗ ಅಂತೀರಾ, ಮಗೂಗೆ ಎರಡೂವರೆ ವರ್ಷ ಅಂತೀರಾ.... ಯಾರಿದ್ದಾರೆ? ನೋಡಿಕೊಳ್ಳೋಕೆ? ಅಂತ ಕಾಳಜಿ ತೋರಿದರು. ಸಧ್ಯಕ್ಕೆ ಅತ್ತೆ, ಮಾವ ಬಂದಿದ್ದಾರೆ.. ಮುಂದೆ ನೋಡ್ಬೇಕು ಅಂತ ಹೇಳ್ತಾ ಉತ್ಸಾಹದಿಂದ ಕೆಲಸಕ್ಕೆ ತೊಡಗಿಕೊಂಡಳು ವಿಜಿ.
ಕೆಲಸ ಮಾಡ್ತಾ ಮಾಡ್ತಾ... ಸಮಾನ ವಯಸ್ಕರ ಜೊತೆ ಬೆರೆಯುತ್ತಾ... ಮಕ್ಕಳೊಂದಿಗೆ ಮಕ್ಕಳಾಗುತ್ತಾ.. ತಾನಾಗಿಯೇ ಬಯಸಿ ಬಂದ ಶಿಕ್ಷಕ ವೃತ್ತಿಗೆ ಸಂಪೂರ್ಣ ನ್ಯಾಯ ಒದಗಿಸತೊಡಗಿದಳು ವಿಜಿ.
ಬೆಳಿಗ್ಗೆ ತನ್ನ ಮಗನನ್ನು ಸ್ಕೂಲಿಗೆ ಬಿಟ್ಟು, ಅವನಿಗೆ ಸ್ಕೂಲ್ ಮುಗಿದ ತಕ್ಷಣ ಶಾಲೆಯ ಎದುರಿಗಿದ್ದ ಪ್ಲೇ ಹೋಮ್ ಗೆ ಹೋಗಲು ತಿಳಿಸಿ, ಮಧ್ಯಾಹ್ನದ ಊಟ, ಸಂಜೆಯ ಸ್ನಾಕ್ಸ್ ಅನ್ನೂ ಸಹ ಪ್ಯಾಕ್ ಮಾಡಿ, ಪ್ಲೇ ಹೋಂ ನಲ್ಲಿ ಹಾಕಲು ಬೇರೆ ಬಟ್ಟೆಯನ್ನೂ ಸಿದ್ಧ ಮಾಡಿಟ್ಟು, ಎರಡು ಬ್ಯಾಗ್ ಗಳನ್ನು ತಯಾರು ಮಾಡಿಬಿಡುತ್ತಿದ್ದಳು ವಿಜಿ. ಕೆಲವೊಮ್ಮೆ ಸಂಜೆ ಬರುವುದು 5 ಗಂಟೆ ಆಗಬಹುದು... ಅಥವಾ 6 ಗಂಟೆ... ಅಷ್ಟರವರೆಗೆ ಮಗ ಪ್ಲೇ ಹೋಂ ನಲ್ಲೇ ಇರಬೇಕಿತ್ತು. ಅವಳು ಸ್ಕೂಲಿನಿಂದ ಬರುವಾಗ ಮಗನನ್ನೂ ಕರೆದುಕೊಂಡು ಬಂದು, ಮನೆಯಲ್ಲಿ ಹಾಲು ಕೊಟ್ಟು, ಏನಾದರೂ ತಿಂಡಿ ತಿನ್ನಿಸಿದ ಕೂಡಲೇ, ಮಗ ಮತ್ತೆ ತನ್ನದೇ ಓರಗೆಯವರಾದ ಗೆಳೆಯರೊಂದಿಗೆ ಬೀದಿಯಲ್ಲಿ ಆಟವಾಡಲು ಹೋಗುತ್ತಿದ್ದ. ಬಂದ ಕೂಡಲೇ ಹೋಮ್ ವರ್ಕ್, ಸ್ವಲ್ಪ ಓದಿಸುವುದು... ದಿನ ಕಳೆದದ್ದೇ ತಿಳಿಯುತ್ತಿರಲಿಲ್ಲ.
ಇನ್ನು ಔದ್ಯೋಗಿಕ ಕ್ಷೇತ್ರದಲ್ಲಿ ಪರಿಚಯಗಳು ಬೆಳೆಯುತ್ತಾ ಬೆಳೆಯುತ್ತಾ ವಿಜಿಯ ಸಂಪರ್ಕ ಕ್ಷೇತ್ರ ದೊಡ್ಡದಾಗುತ್ತಾ ಹೋಯಿತು. ಪರಿಚಯವಾದವರೆಲ್ಲ ಒಂದೆರೆಡು ಪ್ರಶ್ನೆಗಳ ನಂತರ ಕೇಳುವ ಸಾಮಾನ್ಯ ಪ್ರಶ್ನೆ ಅಂದಹಾಗೆ ನಿಮಗೆ ಮಕ್ಕಳೆಷ್ಟು? ಅವರು ಏನು ಮಾಡುತ್ತಾರೆ?
ಪ್ರಾರಂಭದಲ್ಲಿ ಒಬ್ಬನೇ ಮಗ ಈಗ ಯುಕೆಜಿ ಅನ್ನುತ್ತಿದ್ದ ವಿಜಿ, ವರ್ಷಗಳು ಕಳೆದಂತೆ ಸ್ವಲ್ಪ ಪರಿಚಯಸ್ಥರಿಂದ ಇನ್ನೊಂದು ಪ್ರಶ್ನೆಯನ್ನೂ ಎದುರಿಸಬೇಕಾಯಿತು. ಓಹ್ ಒಬ್ಬನೇ ಮಗನಾ? ಯಾಕೆ ಮೇಡಂ ಇನ್ನೊಂದು ಮಗು ಬೇಡವಾ? ಅಂತ ಒಬ್ಬರಂದರೆ, ಇಬ್ಬರೂ ಕೆಲಸಕ್ಕೆ ಹೋಗ್ತೀರಾ, ದುಡ್ಡಿನ ತೊಂದರೆ ನಿಮಗೆ ಇಲ್ಲವಲ್ಲ; ಎರಡು ಮಕ್ಕಳನ್ನು ಸಾಕಲು ಆಗೊಲ್ವಾ? ಯಾಕೆ ಒಂದೇ ಮಗು ಸಾಕಾ?? ಅಂತ ಮತ್ತೊಬ್ಬರು. ಮನೆಯ ಓನರ್ ಅಂತೂ... ವಿಜಿಯವರೆ ಒಂದು ವಿಷಯ ಹೇಳ್ತೀನಿ ಬೇಜಾರು ಮಾಡ್ಕೊಬೇಡಿ.. ಒಬ್ಬ ಮಗ ಮಗ ಅಲ್ಲ... ಒಂದು ಕಣ್ಣು ಕಣ್ಣಲ್ಲ ಅಂತ ಗಾದೇನೇ ಇದೆ. ನಿಮ್ಮ ಮಗ ಈಗ 1ನೇ ಕ್ಲಾಸು. ಇದು ಸರಿಯಾದ ವಯಸ್ಸು... ನೀವ್ಯಾಕೆ ಇನ್ನೊಂದು ಮಗುವಿನ ಯೋಚನೆ ಮಾಡ್ಬಾರ್ದು? ಈ ಪ್ರಶ್ನೆಗೆ ಉತ್ತರ ಕೊಡಲು ತಡಕಾಡುತ್ತಿದ್ದಳು ವಿಜಿ.
ಈಗ ಇರುವ ಮಗುವನ್ನೇ ಪ್ಲೇ ಹೋಮ್ ನಲ್ಲಿ ಬಿಟ್ಟು ಸ್ಕೂಲಿಗೆ ಹೋಗಬೇಕು. ಮನೆಯಲ್ಲಿ ಸಹಾಯ ಮಾಡುವವರು ಯಾರೂ ಇಲ್ಲ. ಇರುವ ಸಂಬಂಧಿಕರೂ ಬೇರೆಯ ಊರಿನಲ್ಲಿ. ಪತಿದೇವರದ್ದೋ 24 ಗಂಟೆಗಳೂ ಸಾಲದು ಎಂಬಂತಹ ಕೆಲಸ. ಒಮ್ಮೆಯಂತೂ ಮಗನನ್ನು ಪ್ಲೇ ಹೋಮ್ ನಲ್ಲಿ ಬಿಟ್ಟಿದ್ದಾಗ ಮಧ್ಯಾಹ್ನದ ಸಮಯದಲ್ಲಿ ಅವನು ಬಿದ್ದು, ತಲೆಗೆ ಕಲ್ಲು ಹೊಡೆದು, ರಕ್ತ ಹೊಳೆಯಂತೆ ಹರಿದು ಡಾಕ್ಟರ್ 4 ಹೊಲಿಗೆಗಳನ್ನು ಹಾಕಿದ್ದರು. ಇದು ವಿಜಿಗೆ ತಿಳಿದದ್ದು, ಸಂಜೆ ಅವನನ್ನು ಕರೆದುಕೊಂಡು ಬರಲು ಹೋದಾಗಲೇ. ತಲೆಗೆ ಬ್ಯಾಂಡೇಜ್ ಹಾಕಿಕೊಂಡು ಸಪ್ಪೆ ಮುಖ ಮಾಡಿಕೊಂಡು ಓಡಿಬಂದು ಅಮ್ಮಾ ಎಂದು ವಿಜಿಯನ್ನು ಮಗು ತಬ್ಬಿಕೊಂಡ ನೆನಪು ಅವಳಿಗೆ ಇನ್ನೂ ಹಸಿರಾಗಿದೆ. ಇರುವ ಮಗನನ್ನು ಹೀಗೆ ಇನ್ನೊಬ್ಬರು ನೋಡಿಕೊಳ್ಳುವಂತೆ ಬಿಡಬೇಕಾಯಿತಲ್ಲ ಎಂಬ ಹೊಟ್ಟೆಯ ಸಂಕಟ ಯಾರಿಗೆ ತಿಳಿಯುತ್ತದೆ? ಅದಕ್ಕೇ ಒಂದೇ ಮಗು ಸಾಕು ಎಂದು ನಿರ್ಧರಿಸಿಬಿಟ್ಟಿದ್ದರು ದಂಪತಿಗಳು.. ಈ ಮಗನೇನೋ ಎಲ್ಲರ ಜೊತೆ ಹೊಂದಿಕೊಂಡು ಎಲ್ಲಿ ಬಿಟ್ಟರೂ ಅಲ್ಲಿ ಇರುವ ಅಭ್ಯಾಸವನ್ನು ಮಾಡಿಕೊಂಡಿದ್ದಾನೆ. ಆದರೆ ಇನ್ನೊಂದು ಮಗುವಾದರೆ ಬಿಟ್ಟು ಹೋಗುವುದೆಲ್ಲಿ? ಅಲ್ಲದೇ ಇಷ್ಟು ಕೆಲಸಗಳ ಒತ್ತಡಗಳ ಮಧ್ಯೆ ಇನ್ನೊಂದು ಮಗುವಿನ ಯೋಚನೆಯನ್ನೂ ಮಾಡಲು ಸಾಧ್ಯವಾಗಿರಲಿಲ್ಲ..
ಆದರೆ ಜನಗಳು ಬಿಡಬೇಕಲ್ಲ; ಸ್ಕೂಲಿನಲ್ಲಿ ಒಬ್ಬ ಟೀಚರ್ ಮೆಟರ್ನಿಟಿ ಲೀವ್ ಮುಗಿಸಿ ಬಂದ ಕೂಡಲೇ, ಸ್ನೇಹಿತರು ತಮಾಷೆ ಮಾಡುತ್ತಿದ್ದರು. ಇನ್ನು ನೆಕ್ಸ್ಟ್ ವಿಜಿಯದ್ದು ಅಂತ... ಇನ್ನೂ ನಿಮ್ಮ ವಯಸ್ಸು ಚಿಕ್ಕದು ವಿಜಿ. ಮನಸ್ಸು ಮಾಡಿ ಇನ್ನೊಂದು ಮಗುವಿಗೆ ಅಂತ ತುಂಬಾ ಆಪ್ತರಾದ ಸಾರಾ ಹೇಳಿದರೆ, ವಿಜಿ, ವಯಸ್ಸಿದ್ದಾಗಲೇ ಇನ್ನೊಂದು ಮಗುವನ್ನು ಹೆತ್ತುಬಿಡಬೇಕು. ಆಮೇಲೆ ಬೇಕೂ ಅಂದ್ರೂ ಆಗಲ್ಲ... ಈಗ ನಿಮಗೆ 28 ವರ್ಷ ಇನ್ನು ತಡ ಮಾಡಬೇಡಿ, ಬೇಕಾದರೆ, ಇರುವ ರಜ ಎಲ್ಲ ಉಪಯೋಗಿಸಿಕೊಂಡರಾಯಿತು ಅಂತ ಶಶಿ. ವಿಜಿ.. ಪುಟ್ಟಂಗೆ 6 ವರ್ಷ ಆಯ್ತು; ಅವನಿಗೆ ತಮ್ಮನೋ ತಂಗೀನೋ ಯಾವಾಗ? ಅಂತ ಓರಗಿತ್ತಿಯ ಕಳಕಳಿ; ನೋಡು ವಿಜಿ ಈಗ್ಲೇ ಮಗು ಆದ್ರೆ ನನ್ನ ಕೈ ಕಾಲು ಗಟ್ಟಿ ಇದೆ. ಬಾಣಂತನ ಮಾಡ್ತೀನಿ ಅಂತ ಅಮ್ಮ; ನೋಡು ಆ ಮಗು ಬೆಳೆದು ದೊಡ್ಡವನಾದ ಮೇಲೆ, ತನ್ನ ಕಷ್ಟ ಸುಖವನ್ನ ಯಾರ ಜೊತೆ ಹಂಚಿಕೊಳ್ಳಬೇಕು? ಇನ್ನೊಂದು ಮಗು ಮನೆಯಲ್ಲಿ ಇರಬೇಕು ಅಂತ ಅತ್ತೆ; ನಿಮ್ಮ ಕಾಲಾನಂತರ ಆ ಮಗುವಿಗೆ ಜೊತೆ ಯಾರು? ಅಂತ ಆತ್ಮೀಯ ಗೆಳತಿ..... ಹೀಗೆ ಹಲವಾರು ಮಂದಿ ಹೇಳಿದಾಗಲೆಲ್ಲ ಮೊದಮೊದಲು ಉತ್ತರಿಸಲು ಹೆಣಗಾಡುತ್ತಿದ್ದ ವಿಜಿ... ನಂತರ ಒಂದೇ ಮಗು ಸಾಕು ಅಂತ ನಿರ್ಧಾರ ಮಾಡಿದ್ದೇವೆ ಅಂತ ಧೈರ್ಯವಾಗಿ ಹೇಳಿಬಿಡುತ್ತಿದ್ದಳು.
ಮಕ್ಕಳಿಗೆ ಪಾಠ ಮಾಡುವ ಸಂಭ್ರಮದಲ್ಲಿ, ಪರೀಕ್ಷೆಗಳ ತಯಾರಿಯಲ್ಲಿ, ವಿವಿಧ ಮಾಡ್ಯೂಲ್ ಗಳ ರಚನೆಯಲ್ಲಿ, ಹೀಗೇ ಸಂಪೂರ್ಣವಾಗಿ ಶಾಲಾ ಕೆಲಸಗಳಲ್ಲಿ ಮುಳುಗಿಹೋದಳು ವಿಜಿ...
ಮನೆಗೆ ಸ್ವಲ್ಪ ಹತ್ತಿರವಾಗುತ್ತದೆ ಎಂದು ಇನ್ನೊಂದು ಶಾಲೆಗೆ ವರ್ಗಾವಣೆಯಾದರೂ ಕೆಲಸಗಳ ಒತ್ತಡ ತಪ್ಪಲಿಲ್ಲ. ಆ ಸ್ಕೂಲಿನಲ್ಲಿ ಇದ್ದವರೆಲ್ಲರೂ ಮಹಿಳಾಮಣಿಗಳೇ... ವಿಜಿ ಇನ್ನೂ ಕಾಲ ಮಿಂಚಿಲ್ಲ... 36 ವರ್ಷ ಅಂತೀರಿ. ಎಷ್ಟೋ ಜನಕ್ಕೆ 30ಕ್ಕೆ ಮದುವೆಯಾಗಿ ಈ ವಯಸ್ಸಿನಲ್ಲಿ ಮಕ್ಕಳಾಗುತ್ತವೆ. ನೀವು ಖಂಡಿತ ಇನ್ನೊಂದು ಮಗುವಿನ ಬಗ್ಗೆ ಯೋಚಿಸಿ ಅಂತ ಎಲ್ಲರೂ ಹೇಳುವವರೇ.....
ಅದಕ್ಕೆಲ್ಲ ಉತ್ತರ ಸಿದ್ಧವಾಗಿರುತ್ತಿತ್ತು. ಮನೆಯಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲ. ಕಾಯಕವೇ ಕೈಲಾಸ.. ಸ್ಕೂಲಿಗೆ 6 ತಿಂಗಳು ರಜಾ ಹಾಕಲು ಸಾಧ್ಯವಿಲ್ಲ... ಮಗುವನ್ನು ಹೆರುವುದೊಂದೇ ಅಲ್ಲ... ಅದನ್ನು ಚೆನ್ನಾಗಿ ನೋಡಿಕೊಳ್ಳಬೇಕು... ಒಳ್ಳೆಯ ಸಂಸ್ಕಾರ ಕೊಡಬೇಕು... ಮಗನಿಗೆ ಎರಡೂವರೆ ವರ್ಷ ಆದಾಗ ಕೆಲಸ ಸಿಕ್ಕಿದ್ರಿಂದ ಅವನನ್ನೇನೋ ಅಷ್ಟು ವರ್ಷ ಮನೆಯಲ್ಲಿದ್ದು ನೋಡಿಕೊಂಡೆ; ಆದರೆ 6 ತಿಂಗಳಿಂದಲೇ ಮತ್ತೆ ಪ್ಲೇ ಹೋಮಿನಲ್ಲಿ ಬಿಟ್ಟು ಹೋಗಲು ಮತ್ತೊಂದು ಮಗುವೇಕೆ? ಕೆಲಸದ ಒತ್ತಡವೇ ಸಾಕಷ್ಟಿದೆ; ಮಗನಿಗೆ ಈಗಾಗಲೇ 14 ವರ್ಷ.... ಮತ್ತೆ ಈ ವಯಸ್ಸಿನಲ್ಲಿ ಆಸ್ಪತ್ರೆ ಓಡಾಟ... ಅಮ್ಮನಿಗೂ ವಯಸ್ಸಾಯ್ತು..... ಹೀಗೇ ನೆಪಗಳ ಮೇಲೆ ನೆಪ.....
ಕಾಲ ಯಾರನ್ನೂ ಕಾಯುವುದಿಲ್ಲ..... ಮಗನಿಗೆ ಬೆಂಗಳೂರಿನ ಒಳ್ಳೆಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೀಟು ಸಿಕ್ಕಿದಾಗ ಕಳುಹಿಸಲೇಬೇಕಾಯಿತು. ಈಗ ಮನೆಯಲ್ಲಿ ಇಬ್ಬರೇ.... ಮೊದಲಿಗಿಂತ ಹೆಚ್ಚು ಕೆಲಸ... ಒತ್ತಡವೂ ಹೆಚ್ಚು.... ಹಿಂದಿನದೆಲ್ಲ ನೆನೆದು ಮನಸ್ಸು ಮತ್ತೆ ಮತ್ತೆ ಭಾರ.... ಇನ್ನೊಂದು ಮಗು ಇರಬೇಕಿತ್ತು.... ನನ್ನ ಹಿಂದೆ ಮುಂದೆ ಓಡಾಡಿಕೊಂಡಿರಲು.... ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಡಲು... ಮಗಳಾಗಿದ್ದರೆ, ನನ್ನ ಸೀರೆ, ಒಡವೆಗಳನ್ನು ಧರಿಸಲು.... ನನ್ನ ಕಷ್ಟಗಳನ್ನು ಹಂಚಿಕೊಳ್ಳಲು.... ನನ್ನ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು.... ಮಗನಾಗಿದ್ದರೆ, ಅಮ್ಮ, ಅಣ್ಣ ಊರಿನಲ್ಲಿ ಇರಲಿ, ನಾನು ನಿನ್ನ ಜೊತೆ ಇರುತ್ತೇನೆ ಎಂದು ಹೇಳಲು, ಅಣ್ಣನಿಗೆ ಪ್ರೀತಿಯ ತಮ್ಮನಾಗಲು... ಅಪ್ಪನಿಗೆ ಮುದ್ದಿನ ಮಗನಾಗಲು.... ಎಲ್ಲರಿಗೂ ಕೈ ಕೂಸಾಗಲು.... ದೇವರೇ! ಈ ಮನಸ್ಸು ಮೊದಲೇ ಏಕೆ ಬರಲಿಲ್ಲ? ಕೆಲಸಗಳು ಯಾವತ್ತೂ ಇದ್ದಿದ್ದೇ... ವಯಸ್ಸು ಇದ್ದಾಗ ಮನಸ್ಸು ಏಕೆ ಮಾಡಲಿಲ್ಲ? ಆದರೆ ..... ಈಗ ವಯಸ್ಸು ಮೀರಿ ಹೋಯಿತಲ್ಲ...ಈ ವಯಸ್ಸಿನಲ್ಲಿ ಮಗುವನ್ನು ಹೆರಲು ಸಾಧ್ಯವಿಲ್ಲ... ಸಾಕುವ ಸಹನೆ ಮೊದಲೇ ಇಲ್ಲ.... ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ....ವರ್ತಮಾನವನ್ನು ಬಿಟ್ಟು, ಭೂತಕಾಲದಲ್ಲಿ ಇರುವುದು ತರವಲ್ಲ..... ಹೀಗೆ ಹಲವು ವಿಧದಲ್ಲಿ ಯೋಚನೆಗಳು ಕಾಡಲಾರಂಭಿಸಿದವು. ಸಣ್ಣ ಮಕ್ಕಳು ಆಟವಾಡುವುದನ್ನು ನೋಡಿದಾಗಲೆಲ್ಲ ಮನೆಯಲ್ಲಿ ಇನ್ನೊಂದು ಮಗು ಇರಬೇಕಿತ್ತು ಎಂಬ ಜಪ ಪ್ರಾರಂಭವಾಗುತ್ತಿತ್ತು...
ಆದರೆ ಮನವೆಂಬ ಮರ್ಕಟ ಇನ್ನೊಂದು ವಿಧವಾಗಿ ಯೋಚಿಸಲು ಶುರುವಿಟ್ಟಿತು...
ಅದೇಕೆ? ಜೀವಿಯನ್ನು ಭೂಮಿಗೆ ತರುವ ಯೋಗ್ಯತೆ ನಮಗೆ ಮಾತ್ರವಿದೆಯೇ? ನಾವು ಮನಸ್ಸು ಮಾಡಿದರೆ ಮಕ್ಕಳಾಗಿ ಬಿಡುತ್ತದೆಯೇ? ಮಗುವೊಂದು ಭೂಮಿಗೆ ಬರಲು ನಾವು ಕಾರಣವಾಗುತ್ತೇವೆ ಅಷ್ಟೇ... ನಮಗೆ ಒಂದು ಮಗುವನ್ನು ಮಾತ್ರ ಭೂಮಿಗೆ ತರುವ ಅವಕಾಶ... ಎಷ್ಟೋ ಜನ ಮಕ್ಕಳಾಗದಂತೆ ಎಚ್ಚರಿಕೆ ವಹಿಸಿದರೂ ಮಕ್ಕಳಾಗುವುದಿಲ್ಲವೇ? ಅಥವಾ ಕೆಲವರು ಎಷ್ಟೇ ಪ್ರಯತ್ನ ಪಟ್ಟರೂ, ವೈದ್ಯಕೀಯವಾಗಿ ಎಲ್ಲವೂ ಸರಿ ಇದ್ದರೂ ಅವರಿಗೆ ಮಕ್ಕಳೇ ಆಗುವುದಿಲ್ಲವಲ್ಲವೇ? ನನಗೇ ತಿಳಿದಿರುವಂತೆ ನನ್ನ ಆತ್ಮೀಯ ಗೆಳತಿ ಎರಡು ಬಾರಿ ಗರ್ಭ ಧರಿಸಿದರೂ ಮಗುವನ್ನು ಉಳಿಸಿಕೊಳ್ಳಲಾಗಲಿಲ್ಲ; ಮತ್ತೊಬ್ಬಳಿಗೆ ದಿನ ತುಂಬಿದ ನಂತರ ಹೆರಿಗೆಯಾದರೂ ಜನಿಸಿದ ಕೆಲವೇ ಗಂಟೆಗಳಲ್ಲಿ ಶಿಶುವಿನ ಮರಣ; ಮತ್ತೊಬ್ಬಳ ಮನೆಯಲ್ಲಿ ಗಂಡುಮಗುವೇ ಬೇಕೆಂದು, ಇಬ್ಬರು ಹೆಣ್ಣುಮಕ್ಕಳಿದ್ದರೂ ಮತ್ತೆ ಮಗುವಿಗಾಗಿ ಪ್ರಯತ್ನ ಆದರೆ ಅದೂ ಹೆಣ್ಣು; ಹಾಗಾದರೆ ಇದು ದೈವ ನಿಯಾಮಕವೇ? ಹೆಚ್ಚು ಮಕ್ಕಳು ಇರಬೇಕು ಎಂಬ ಬಯಕೆ ಏಕೆ? ಭಾರತೀಯ ಸಂಸ್ಕೃತಿಯಲ್ಲಿ ಮಕ್ಕಳು ಪೋಷಕರಿಗೆ ಆಸರೆ ಎಂದೇ?
ಎಷ್ಟೇ ಮಕ್ಕಳಿದ್ದರೂ ಕೊನೆಗಾಲದಲ್ಲಿ ಅವರ ಜೊತೆಗೆ ಯಾರೂ ಇಲ್ಲದಂತೆ ಎಷ್ಟೋ ಜನರ ಬದುಕು ಅಂತ್ಯಗೊಳ್ಳುವುದಿಲ್ಲವೇ? ಒಬ್ಬೊಬ್ಬ ಮಗ/ಮಗಳು ಒಂದೊಂದು ಕಡೆ ಇದ್ದು ವೃದ್ಧಾಶ್ರಮದಲ್ಲಿ ಇರುವ ಎಷ್ಟೋ ಹಿರಿಯ ಜೀವಗಳಿಲ್ಲವೇ? ವಯಸ್ಸಾದ ನಂತರ ನಮ್ಮನ್ನು ನೋಡಿಕೊಳ್ಳಬೇಕು ಎಂಬ ಸ್ವಾರ್ಥವೂ ಇದರಲ್ಲಿ ಅಡಗಿದೆಯೇ? ಒಂದು ಮುತ್ತಿನಂಥ ಮಗುವನ್ನು ಹಡೆದರೆ ಸಾಲದೇ? ಜನಸಂಖ್ಯೆ ಬಿಲಿಯನ್ ಗಳನ್ನು ದಾಟುತ್ತಿರುವಾಗ ನಾವು ಮಾಡಿದ ಆಲೋಚನೆ ಸರಿಯಲ್ಲವೇ? ಹೇಗಿದ್ದರೂ ನಾವು ಬರುವಾಗಲೂ ಒಂಟಿ, ಹೋಗುವಾಗಲೂ ಒಂಟಿ ಅಲ್ಲವೇ? ಎಂದು ಯೋಚಿಸುತ್ತಾ ಯೋಚಿಸುತ್ತಾ ಹೈರಾಣಾಗಿ ಹೋಗಿದ್ದ ವಿಜಿಗೆ.... ಒಂದೆರೆಡು ದಿನಗಳ ಹಿಂದೆ ಕೇಳಿದ ಖಲೀಲ್ ಗಿಬ್ರಾನ್ ಅವರ ಕವಿತೆ ನೆನಪಾಯಿತು...
ನಿಮ್ಮ ಮಕ್ಕಳು ನಿಮ್ಮವರಲ್ಲ..... ನಿಮ್ಮ ಮೂಲಕ ಬಂದಿದ್ದಾರೆಯೇ ಹೊರತು ನಿಮ್ಮಿಂದಾಗಿ ಅಲ್ಲ .... ನೀವು ಬಿಲ್ಲಾದರೆ, ನಿಮ್ಮ ಮಕ್ಕಳು ನಿಮ್ಮಿಂದ ಚಿಮ್ಮಿದ ಜೀವಂತ ಬಾಣಗಳು.... ಬಿಲ್ಲುಗಾರನು ಬಾಣಗಳನ್ನು ದೂರಕ್ಕೆ ಚಿಮ್ಮಿಸಲು ಬಿಲ್ಲನ್ನು ಬಾಗಿಸುತ್ತಾನೆ; ನೀವು ಬಾಗಬೇಕು.... ಈ ಕವಿತೆಯ ಆಶಯ ನಮ್ಮ ಮಕ್ಕಳ ಮೇಲೆ ನಮ್ಮ ಆಲೋಚನೆಗಳನ್ನು ಹೇರಬಾರದು, ಅವರಿಗೆ ಅವರದ್ದೇ ದಾರಿಯಿದೆ, ಗುರಿಯಿದೆ ಎಂಬುದಾಗಿದ್ದರೂ ವಿಜಿಗೆ ಇನ್ನೊಂದು ಸತ್ಯ ಹೊಳೆಯಿತು....
ಜೀವಂತ ಬಾಣಗಳು... ಯಾರ ಮಕ್ಕಳಾದರೇನು? ಆ ಬಾಣಗಳು ಬಿಲ್ಲುಗಾರನೆಂಬ ದೇವನಿಂದ ಹೊರಟ ದೇವರ ಮಕ್ಕಳು..... ದೇವರ ಮಕ್ಕಳು...... ಮಕ್ಕಳ ಸುತ್ತಲೇ ಕೆಲಸ ಮಾಡುವ ತನಗೇಕೆ ಇದರ ಅರಿವಾಗಲಿಲ್ಲ? ವಿವಿಧ ಹಿನ್ನೆಲೆಗಳಿಂದ ಬಂದ ಹಲವು ಮಕ್ಕಳು. ವಿಜಿಗೆ ನೆಮ್ಮದಿಯಾಯಿತು.... ಈಗ, ಆಕೆ ನಿಮಗೆ ಎಷ್ಟು ಜನ ಮಕ್ಕಳು? ಎಂಬ ಪ್ರಶ್ನೆಗೆ ಉತ್ತರಿಸಲು ಹಿಂಜರಿಯಲಾರಳು... ಈಗ ಆಕೆಗೆ ಬಹಳಷ್ಟು ಮಕ್ಕಳು... ಶಾಲೆಯ ಮಕ್ಕಳೆಲ್ಲರೂ ಆಕೆಯ ಮಕ್ಕಳು....ದೇವರ ಮಕ್ಕಳು.... ನಾವೇನನ್ನೋ ಸಾಧಿಸುತ್ತೇವೆ ಎಂಬ ಅದ್ಭುತ ಹೊಳಪನ್ನು ಕಂಗಳಲ್ಲಿ ಇಟ್ಟುಕೊಂಡು, ನಾಳಿನ ಸುಂದರ ಬದುಕಿನ ಹೊಂಗನಸನ್ನು ಹೊಂದಿರುವ, ಅನಂತದೆಡೆಗೆ ಹಾರಿಹೋಗಲು ಸಜ್ಜಾಗಿ ಮಾರ್ಗದರ್ಶನಕ್ಕಾಗಿ ಕಾದಿರುವ ಜೀವಂತ ಬಾಣಗಳಾದ ದೇವರ ಮಕ್ಕಳು....
Tumba chennagide. Adbhuta lekhana. Bhavanatmakavagide. Ella onde makkala tayandira bhavanegalige spandisuvantide. Perfect ending👏🏻👏🏻👏🏻
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ. ಹಣೆಬರಹ ಅಳಿಸಲಾಗದu .
ಪ್ರತ್ಯುತ್ತರಅಳಿಸಿವಿಧಿ ಬರಹ ತ ಡೆಯ ಲಾಗದು. ಎಲ್ಲರೂ ದೇವರ ಮಕ್ಕಳೆ. ಮಕ್ಕಳಿಗೆ ದಾರಿ ತೋರುವವರೆ ದೇವರು.ok thank you ನಿಮ್ಮ ಲೇಖನಕ್ಕೆ.keep it up
Thank you
ಅಳಿಸಿಈ ಬರಹದ ಬಹುಪಾಲು ನನ್ನ ಸ್ವಂತ ಅನುಭವವನ್ನು ನೆನಪಿಸುತ್ತಿದೆ ಬರವಣಿಗೆ ಉತ್ತಮ ವಾಗಿದೆ. ನೀವೊಬ್ಭ ಲೇಖಕಿಯ ಹೌದು.
ಅಳಿಸಿಧನ್ಯವಾದಗಳು
ಅಳಿಸಿಬಹಳ ಚೆನ್ನಾಗಿ ಮೂಡಿ ಬಂದಿದೆ ನಮ್ಮ ಮಕ್ಕಳು ಬಾಣದಂತೆಯೇ. ಅಂತೆಯೇ ನಮ್ಮ ವಿದ್ಯಾರ್ಥಿಗಳೆ ನಮ್ಮ ಮಕ್ಕಳು
ಪ್ರತ್ಯುತ್ತರಅಳಿಸಿThank you very much sir
ಅಳಿಸಿ,ಬಹಳ ಚೆನ್ನಾಗಿ ಮೂಡಿಬಂದಿದೆ ಎಲ್ಲಾ ತಾಯಂದಿರು ಒಂದು ಹಂತದಲ್ಲಿ ಯೋಚನೆ ಮಾಡಿ ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದೆನಿಸುತ್ತದೆ
ಪ್ರತ್ಯುತ್ತರಅಳಿಸಿThank you very much sir
ಪ್ರತ್ಯುತ್ತರಅಳಿಸಿತಾಯಿ ಪಾತ್ರ ಜಗತ್ತಿನಲ್ಲಿ ಅಮೋಘ..!! ಮನಸ್ಸಿನ ನೇರ ನುಡಿಗಳು ಲೇಖನದಲ್ಲಿ ಚನ್ನಾಗಿ ಮೂಡಿ ಬಂದಿದೆ ಮೆಡಮ್.
ಪ್ರತ್ಯುತ್ತರಅಳಿಸಿಒಣ ಗಣಿತವ ಗುಣಗುಣಿಸುವ ಮನಸ್ಸಿನಲ್ಲಿ ಭಾವನೆಗಳ ತುಡಿತವನ್ನೂ ಹಿಡಿದಿಟ್ಟು ಸಾಹಿತ್ಯವಾಗಿಸಿ ಹರಿಯಬಿಡುವ ಗೊಡವೆಗೆ ಕೈ ಹಾಕಿದ್ದೀರಿ.
ಪ್ರತ್ಯುತ್ತರಅಳಿಸಿಪ್ರಯತ್ನ ಚನ್ನಾಗಿದೆ ಮಾಗಿದಮೇಲೆ ರಸವತ್ತಾದ ಕವಳವೂ ಬರುವ ಸಾಧ್ಯತೆ ಕಾಣುತ್ತಿದೆ.
ನಿರಂತರತೆ ಕಾಯ್ದುಕೊಳ್ಳಿ all the best.
Thank you very much sir
ಅಳಿಸಿvijiyala guilt trips, ಅದರಿಂದ ಹೊರಬರಲು Gibran ನ ಕಾವ್ಯದ ಮೊರೆ... ಹೀಗೆ ಮಗಳು,ಹೆಂಡತಿ,
ಪ್ರತ್ಯುತ್ತರಅಳಿಸಿಸೊಸೆ ಹಾಗೂ ತಾಯಿ ಪಾತ್ರಗಳು ಸುತ್ತ ಓಡಾಡುತ್ತಾ ಎರಡು ದಶಕಗಳ ಆಯುಷ್ಯ ಕಳೆಯುವ ಪರಿ ಸೊಗಸಾಗಿ ಮೂಡಿಬಂದಿದೆ
Thank you so much🙏🙏
ಪ್ರತ್ಯುತ್ತರಅಳಿಸಿShobsಮೇ 24, 2021 10:21 ಪೂರ್ವಾಹ್ನ
ಪ್ರತ್ಯುತ್ತರಅಳಿಸಿvijiyala guilt trips, ಅದರಿಂದ ಹೊರಬರಲು Gibran ನ ಕಾವ್ಯದ ಸಾಂತ್ವನ.. ಹೀಗೆ ಮಗಳು,ಹೆಂಡತಿ,
ಸೊಸೆ ಹಾಗೂ ತಾಯಿ ಪಾತ್ರಗಳು ಸುತ್ತ ಓಡಾಡುತ್ತಾ ಎರಡು ದಶಕಗಳ ಆಯುಷ್ಯ ಕಳೆಯುವ ಪರಿ ಸೊಗಸಾಗಿ ಮೂಡಿಬಂದಿದೆ
Nice
ಪ್ರತ್ಯುತ್ತರಅಳಿಸಿಲೇಖನ ತುಂಬಾ ಚೆನ್ನಾಗಿದೆ.ಆದ್ರೂ ಕಾಳಜಿಯಿಂದ ನೋಡಿಕೊಳ್ಳುವ,ಸಂಸ್ಕಾರ ನೀಡಿ ಬೆಳೆಸುವ ತಂದೆ ತಾಯಿಗೆ ಎರಡು ಮಕ್ಕಳು ಹೆಚ್ಚಿನ ಜವಾಬ್ದಾರಿ ಏನಲ್ಲ.ಆದ್ದರಿಂದ ವಿಜಿಗೆ ಇನ್ನೊಂದು ಮಗು ಇದ್ದರೆ ಜೀವನ ಇನ್ನೂ ಖುಷಿಯಾಗಿರೋದು.
ಪ್ರತ್ಯುತ್ತರಅಳಿಸಿ😁😁😄
ಅಳಿಸಿVery interesting story it reflects somany teachers real life stories
ಪ್ರತ್ಯುತ್ತರಅಳಿಸಿThank you very much
ಅಳಿಸಿArthapoornavagide...teacher ge maneyalli thamma makkalanthe, students schoolnalli avara makkale..
ಪ್ರತ್ಯುತ್ತರಅಳಿಸಿಹೌದು ಮೇಡಮ್. ಧನ್ಯವಾದಗಳು
ಅಳಿಸಿSuper madam
ಪ್ರತ್ಯುತ್ತರಅಳಿಸಿThank you
ಅಳಿಸಿತುಂಬ ಚೆನ್ನಾಗಿ ಬರೆದಿದ್ದೀರ ..
ಪ್ರತ್ಯುತ್ತರಅಳಿಸಿma'am
ಪ್ರತ್ಯುತ್ತರಅಳಿಸಿVery nice article ma'am ..
Very apt for the present situation .
Welldone ma'am .
Congratulions 💐💐💐💐 to u ma'am .
Thank you very much
ಅಳಿಸಿMercy here .....
ಪ್ರತ್ಯುತ್ತರಅಳಿಸಿಬರವಣಿಗೆ ತುಂಬ ಚೆನ್ನಾಗಿದೆ. ಅರ್ಥಪೂರ್ಣವಾಗಿದೆ. ಸತ್ಯದ ಮಾತು. ಇದನ್ನು ನಾವು ಅರ್ಥಮಾಡಿಕೊಂಡರೆ ಎಷ್ಟೋ ಮಕ್ಕಳಿಗೆ ಅಮ್ಮ ಎನ್ನುವ ೨ ಪದದ ಸುಂದರವಾದ ಪ್ರೀತಿ ಸಿಗುತ್ತದೆ. 👌
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏
ಅಳಿಸಿಯಾರು ಎಷ್ಟೇ ಹೇಳಿದರೂ ಕೇಳುವ ಸ್ಥಿತಿಯಲ್ಲಿ ನಾವಿರುವುದಿಲ್ಲ. ಅಲ್ಲು. ಈಗ ಪಶ್ಚಾತ್ತಾಪ ಆಗುತ್ತದೆ.😔
ಪ್ರತ್ಯುತ್ತರಅಳಿಸಿಅದಕ್ಕೇ ಮಕ್ಕಳೆಲ್ಲಾ ದೇವರ ಮಕ್ಕಳು ಅಂದುಕೊಂಡು ಬಿಡೋಣ🙂
ಅಳಿಸಿಲೇಖನ ತುಂಬಾ ಉತ್ತಮವಾಗಿದೆ ಮೇಡಂ
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏
ಅಳಿಸಿಸುಂದರವಾದ ಸಹಜವಾದ ನಿರೂಪಣೆ
ಪ್ರತ್ಯುತ್ತರಅಳಿಸಿತುಂಬಾ ಅದ್ಭುತವಾಗಿದೆ. ನಿಜವಾಗ್ಲೂ ಎರಡು ಮಕ್ಕಳನ್ನು ಸಾಕುವುದು ತುಂಬಾನೇ ಕಷ್ಟ. ಒಂದು ಮಗುವಾದಾಗ ನಮ್ಮ ಮನಸ್ಸು ಆ ಮಗುವಿನ ಸುತ್ತಲೂ ಓಡುತ್ತಿರುತ್ತದೆ. ಎರಡು ಮಕ್ಕಳಾದಾಗ ಅವರ ಜಗಳಗಳನ್ನು ಬಿಡಿಸಲಿಕ್ಕೆ ಟೈಮ್ ಇಲ್ಲವೇನೋ ಎನ್ನುವಷ್ಟು ಬೇಜಾರಾಗುತ್ತದೆ. ಒಂದು ಕಡೆ ಸ್ಕೂಲು ಇನ್ನೊಂದು ಕಡೆ ಮನೆಗೆಲಸ ಮಕ್ಕಳಿಗೆ ಹೋಮ್ ವರ್ಕ್ ಮಾಡ್ಸೋದು ಆದರ ಮಧ್ಯದಲ್ಲಿ ನೆಂಟ್ರು ಎಲ್ಲವನ್ನೂ ಸಂಭಾಳಿಸುವಲ್ಲಿ, ಎಲ್ಲೂ ನ್ಯಾಯ ಒದಗಿಸಲಿಲ್ಲ ಎಂಬ ಆತಂಕ. ನಿಮ್ಮ ನಿರ್ಧಾರಕ್ಕೆ ನನ್ನದೊಂದು ಸಲಾಂ ಮೇಡಂ. ನಿಮ್ಮ ಬರವಣಿಗೆಯ ಶೈಲಿಯೂ ಕೂಡ ಅದ್ಭುತವಾಗಿದೆ. ನಿಮ್ಮ ಅನುಭವಗಳೇ ಬರವಣಿಗೆ ರೂಪದಲ್ಲಿ ಕಾಣುವಂತೆನಿಸಿದೆ. ಧನ್ಯವಾದಗಳು ಮೇಡಂ
ಪ್ರತ್ಯುತ್ತರಅಳಿಸಿನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು 🙏
ಅಳಿಸಿಆತ್ಮೀಯ ಕಥನ
ಪ್ರತ್ಯುತ್ತರಅಳಿಸಿSingle child parents ಅನಿಸಿಕೆ/ ಅನಿವಾರ್ಯ
ಪ್ರತ್ಯುತ್ತರಅಳಿಸಿ